ಸಂಭ್ರಮ ಶನಿವಾರ GLPS SHANTINAGAR
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
ಶಾಂತಿನಗರ ಬ್ಯಾಹಟ್ಟಿ
ಸಂಭ್ರಮ ಶನಿವಾರ
ಇಂದಿನ ವಿಷಯ ಸಾರ್ವಜನಿಕ ಸೌಕರ್ಯಗಳು ಮತ್ತು ನಮ್ಮ ಜವಾಬ್ದಾರಿಗಳು
ಈ ವಿಷಯದ ಕುರಿತು ಇಂದು ನಮ್ಮ ಶಾಲೆಯಲ್ಲಿ ಸಂಭ್ರಮ ಶನಿವಾರ ಕಾರ್ಯಕ್ರಮ ಆಚರಿಸಲಾಯಿತು ಇದು ಬ್ಯಾಗ್ರಹಿತ ದಿನವಾಗಿದ್ದು ಮಕ್ಕಳಿಗೆ ಈ ಮೇಲಿನ ವಿಷಯದ ಕುರಿತು ಕೆಲವು ಚಟುವಟಿಕೆಗಳನ್ನು ಮಾಡಿಸಲಾಯಿತು
ಒಂದು ಮತ್ತು ಎರಡನೇ ತರಗತಿಯ ಮಕ್ಕಳಿಗೆ ಸಾರ್ವಜನಿಕ ಸೌಕರ್ಯಗಳ ಚಿತ್ರಗಳಿಗೆ ಬಣ್ಣ ತುಂಬುವ ಸ್ಪರ್ಧೆ ಹಾಗೂ ಮೂರನೇ ತರಗತಿಯವರಿಗೆ ಸಾರ್ವಜನಿಕ ಸೌಕರ್ಯಗಳ ಚಿತ್ರಗಳನ್ನು ಬರೆಯುವ ಸ್ಪರ್ಧೆ ಹಾಗೂ ನಾಲ್ಕನೇ ತರಗತಿಯವರಿಗೆ ಸಾರ್ವಜನಿಕ ಸೌಕರ್ಯಗಳು ಮತ್ತು ನಮ್ಮ ಜವಾಬ್ದಾರಿ ಕುರಿತು ಆಶುಭಾಷಣ ಸ್ಪರ್ಧೆ ಮತ್ತು ಐದನೇ ತರಗತಿಯ ಮಕ್ಕಳಿಗೆ ಇದೇ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಯಿತು
ಇದರ ಜೊತೆಗೆ ಮಕ್ಕಳ ಖುಷಿಗಾಗಿ ಕ್ರಾಫ್ಟ್ ಕೆಲಸವನ್ನು ಕೂಡ ಹೇಳಿಕೊಡಲಾಯಿತು ಒಟ್ಟಾರೆಯಾಗಿ ಕೊನೆಯಲ್ಲಿ ಸಾರ್ವಜನಿಕ ಸೌಕರ್ಯಗಳ ಉಪಯೋಗ ಅವುಗಳ ರಕ್ಷಣೆ ಗೋಸ್ಕರ ನಮ್ಮ ಜವಾಬ್ದಾರಿಗಳನ್ನು ಕುರಿತು ಮಕ್ಕಳಿಗೆ ವಿಷಯ ತಿಳಿಸಿಕೊಡಲಾಯಿತು



















