ಶಿಕ್ಷಕ ಪೋಷಕ ಮಹಾಸಭೆ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ
ಶಾಂತಿನಗರ ಬ್ಯಾಹಟ್ಟಿ
ಶಿಕ್ಷಕ ಪೋಷಕರ ಮಹಾಸಭೆ-2025
ಇಂದು ನಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಶಿಕ್ಷಕ ಪೋಷಕರ ಮಹಾಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿಯ ಸರ್ವ ಸದಸ್ಯರು ,ಪಾಲಕರು, ಪೋಷಕರು, ಶಿಕ್ಷಕರು ಹಾಗೂ ಮುದ್ದು ಮಕ್ಕಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು .
ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ವಾಚನ, ಸರ್ಕಾರದ ಯೋಜನೆಗಳು ಕುರಿತು ಮಾಹಿತಿ ಎಫ್ಎಲ್‌ಎನ್ ಕುರಿತು ಮಾಹಿತಿ ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ,ಆರ್ ಟಿ ಇ ಮಾಹಿತಿ, ಬಾಲಕಾರ್ಮಿಕ, ಬಾಲ್ಯ ವಿವಾಹ ಇತ್ಯಾದಿ ಹಲವಾರು ವಿಷಯಗಳ ಕುರಿತು ಚರ್ಚಿಸಲಾಯಿತು .
ಜೊತೆಗೆ ಪಾಲಕರಿಗೆ ಖುಷಿ ಪಡಿಸಲು ಮನರಂಜನ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು ,ಜೊತೆಗೆ ಮಕ್ಕಳಿಗೆ ಹಮ್ಮಿಕೊಂಡ ಆಟಗಳಲ್ಲಿ ಗೆಲವು ಸಾಧಿಸಿದ ಮಕ್ಕಳಿಗೆ ಬಹುಮಾನ ವಿತರಣೆ ಕೂಡ ನಡೆಯಿತು.
ಈ ಕಾರ್ಯಕ್ರಮದ ಕೆಲವು ಫೋಟೋಗಳು ನಿಮಗಾಗಿ































