ಶಾಲಾ ಸಂದರ್ಶನ (ಪುಷ್ಠಿ ತಂಡ)
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
ಶಾಂತಿನಗರ ಬ್ಯಾಹಟ್ಟಿ
ಇಂದು ನಮ್ಮ ಶಾಲೆಗೆ (ಪುಷ್ಠಿ ತಂಡ) ಡಯಟ್ ಹಿರಿಯ ಉಪನ್ಯಾಸಕರಾದ ಹಾಗೂ ಜಿಲ್ಲಾ ನಲಿ ಕಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ವಿಜಯಲಕ್ಷ್ಮಿ ಅರಕಸಾಲಿ ಮೇಡಂ ಹಾಗೂ ಬಿ ಆರ್ ಸಿ ಯ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀಯುತ ಸಂತೋಷ್ ದಂಡಗಲ್ ಸರ್ ಹಾಗೂ ಬಿ ಆರ್ ಸಿ ಉಣಕಲ್ ಬಿ ಆರ್ ಪಿ , ನಲಿ ಕಲಿ ತಾಲೂಕಾ ನೋಡಲ್ ಅಧಿಕಾರಿಗಳಾದ ಶ್ರೀಯುತ ರಾಚನಗೌಡ್ರು ಸರ್ ಹಾಗೂ ನಮ್ಮ ಕ್ಲಸ್ಟರ್ ನ ಸಿಆರ್ಪಿಗಳಾದ ಶ್ರೀಯುತ ದುರ್ಗೇಶ ಮಾದರ್ ಸರ್ ಇವರು ಶಾಲೆಗೆ ಭೇಟಿ ನೀಡಿದರು. ಶಾಲೆಯ ಅಭಿವೃದ್ಧಿ ಮಕ್ಕಳ ಕಲಿಕೆ SDMC ಸಹಭಾಗಿತ್ವ ಕುರಿತು ಮಾರ್ಗದರ್ಶನ ಮಾಡಿದರು.
ಶ್ರೀಮತಿ ವಿಜಯಲಕ್ಷ್ಮಿ ಅರಕಸಾಲಿ ಮೇಡಂ ಅವರು ನಲಿ ಕಲಿ ತರಗತಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಬೆರೆತು ಅವರ ಕಲಿಕೆಯನ್ನು ಪರೀಕ್ಷಿಸಿದರು. ಹಾಗೂ ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದರು.
SDMC ಪುಷ್ಟಿ ಸಂದರ್ಶನ
ದಿನಾಂಕ 03/03/2025 ರಂದು GHPKBS ಹೆಬಸೂರ
GHPKS ಹೆಬಸೂರ GHPKGS ಬ್ಯಾಹಟ್ಟಿ ಶಾಲೆಯ ಪ್ರಧಾನ ಗುರುಗಳು ಹಾಗೂ SDMCಯ ಸದಸ್ಯರ ತಂಡ ಸಂದರ್ಶನ ಮಾಡಿದರು
ಹಾಗೂ
ದಿನಾಂಕ 04/03/2025 ರಂದು GLPS ಪಂಚಾಯತಿ ಬ್ಯಾಹಟ್ಟಿ , GHPS ಕಿರೆಸೂರ ಮತ್ತು GMPS ಬ್ಯಾಹಟ್ಟಿ ಶಾಲೆಯ ಪ್ರಧಾನ ಗುರುಗಳು ಮತ್ತು SDMC ಸದಸ್ಯರ ತಂಡ ಸಂದರ್ಶನ ನೀಡಿದರು.
ಸಂದರ್ಶನದ ಸಮಯದಲ್ಲಿ ಶಾಲೆಯ ಅಭಿವೃದ್ಧಿ ಮತ್ತು ಮಕ್ಕಳ ಕಲಿಕೆಯಲ್ಲಿ ಬೆಳವಣಿಗೆಯನ್ನು ಕುರಿತು ಚರ್ಚಿಸಿದರು. ಹಾಗೂ ಶಾಲೆಯ ಅಭಿವೃದ್ಧಿಗೋಸ್ಕರ SDMC ಪಾತ್ರ ಏನು ಎಂಬುದನ್ನು ಕೂಡ ಅರಿತುಕೊಂಡರು .
ಒಳ್ಳೆಯ ಎಸ್ಡಿಎಂಸಿ ಇದ್ದರೆ ಶಾಲೆಯ ಅಭಿವೃದ್ಧಿ ಸಾಧ್ಯ ಎಂಬುದನ್ನು ಮನಗಂಡರು ಹಾಗೂ ನಮ್ಮ ಶಾಲೆಯ ಗುಣಾತ್ಮಕ ಕಲಿಕೆ ಹಾಗೂ ಸೌಂದರ್ಯೀಕರಣವನ್ನು ಕುರಿತು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು ಮತ್ತು ಮಾರ್ಗದರ್ಶನ ನೀಡಿದರು. ಸಂದರ್ಶನ ನೀಡಿ ಉತ್ತಮ ಅಭಿಪ್ರಾಯ ನೀಡಿದ ಎಲ್ಲಾ ಶಾಲೆಯ ಪ್ರಧಾನ ಗುರುಗಳು ಹಾಗೂ ಎಸ್ಡಿಎಂಸಿ ಸದಸ್ಯರ ತಂಡಕ್ಕೆ ಶಾಲೆಯ ಪರವಾಗಿ ಹಾಗೂ ನಮ್ಮ ಎಸ್ ಡಿ ಎಮ್ ಸಿ ಪರವಾಗಿ ತಮಗೆ ಧನ್ಯವಾದಗಳು
ಪ್ರಧಾನ ಗುರುಗಳು
ಶ್ರೀ G S ಹುಬ್ಬಳ್ಳಿ
ಸಹ ಶಿಕ್ಷಕರು
ಶ್ರೀಮತಿ ಮಂಜುಳಾ ಮುಕ್ರಿ
ಶ್ರೀ ಬಿ ಆಯ್ ಕೆಂಚನಗೌಡ್ರ
2nd day visit
thank you





































































