SDMC ಸಭೆ GLPS ಶಾಂತಿನಗರ ಬ್ಯಾಹಟ್ಟಿ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ
ಶಾಂತಿನಗರ ಬ್ಯಾಹಟ್ಟಿ
ಇಂದು ನಮ್ಮ ಶಾಲೆಯಲ್ಲಿ ಗಣರಾಜ್ಯೋತ್ಸವ ಪೂರ್ವ ತಯಾರಿ ಹಾಗೂ ಶಾಲೆಯ ಅಭಿವೃದ್ಧಿಯ ಹೊಸ ಯೋಜನೆಗಳು, ಮಕ್ಕಳ ಕಲಿಕೆ ಇತ್ಯಾದಿ ಹಲವಾರು ವಿಷಯಗಳ ಕುರಿತು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸಭೆಯನ್ನು ಕರೆಯಲಾಗಿತ್ತು .
ಈ ಸಭೆಗೆ ಸ್‌ಡಿಎಂಸಿ ಅಧ್ಯಕ್ಷರಾದ ಶ್ರೀಯುತ ಪ್ರಕಾಶ್ ಕರಶೆಟ್ಟಿ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಸುಮಂಗಲ ನವಲೂರ್ ಹಾಗೂ ಎಸ್ಡಿಎಂಸಿಯ ಸರ್ವ ಸದಸ್ಯರು ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸಿದರು.
ಜೊತೆಗೆ ಶಾಲೆ ಪ್ರಧಾನ ಗುರುಗಳು ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದು ಶಾಲೆಯ ಅಭಿವೃದ್ಧಿ ಕುರಿತು ಹೊಸ ಮಾರ್ಗಸೂಚಿಗಳನ್ನು ಯೋಜಿಸಿದರು.
ಈ ಸಭೆಯ ಕೆಲವು ಭಾವಚಿತ್ರಗಳು ನಿಮಗಾಗಿ

