ಗಣರಾಜ್ಯೋತ್ಸವ ದಿನಾಚರಣೆ 26/01/2025 GLPS SHANTINAGAR BYAHATTI



 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಬ್ಯಾಹಟ್ಟಿ 

ಗಣರಾಜ್ಯೋತ್ಸವ ದಿನಾಚರಣೆ



ಇಂದು ನಮ್ಮ ಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ನೆರವೇರಿಸಲಾಯಿತು ಈ ಕಾರ್ಯಕ್ರಮಕ್ಕೆ ಬ್ಯಾಹಟ್ಟಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಮಾಜಿ ಉಪಾಧ್ಯಕ್ಷರು ಹಾಗೂ ನಮ್ಮ ವಾರ್ಡಿನ ಗ್ರಾಮ ಪಂಚಾಯತಿ ಸದಸ್ಯರು ನಮ್ಮ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಮತ್ತು ಊರಿನ ಹಿರಿಯ ನಾಗರಿಕರು ಮತ್ತು ನಮ್ಮ ಶಾಲೆಯ ಮುದ್ದು ಮಕ್ಕಳ ಪಾಲಕರು ಮತ್ತು ಅಂಗನವಾಡಿಯ ಶಿಕ್ಷಕರು& ಸಹಾಯಕರು ಅಂಗನವಾಡಿಯ ಮುದ್ದು ಮಕ್ಕಳು ಮತ್ತು ನಮ್ಮ ಶಾಲೆಯ ವಿದ್ಯಾರ್ಥಿಗಳು ನಮ್ಮ ಶಾಲೆಯ ಶಿಕ್ಷಕರ, ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು, ಯುವಕರು ಹೀಗೆ ಎಲ್ಲರೂ ಸೇರಿ ಈ ಕಾರ್ಯಕ್ರಮವನ್ನು ತುಂಬಾ ಚ್ಚುಕಟ್ಟಾಗಿ ನೆರವೇರಿಸಲಾಯಿತು. 

ಮೊದಲಿಗೆ ಧ್ವಜಾರೋಹಣ ಕಾರ್ಯಕ್ರಮವನ್ನು ಮಾಡಿ ನಂತರ ವಸತಿ ನಿಲಯದ ಧ್ವಜಾರೋಹಣ ಕಾರ್ಯಕ್ರಮವನ್ನು ಮುಗಿಸಿಕೊಂಡು ಬರಲಾಯಿತು ತದನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು  ನೆರವೇರಿಸಲಾಯಿತು 

ಜೊತೆಗೆ ಶಾಲೆಯ ಮಕ್ಕಳಿಗೆ ಪ್ರಶಸ್ತಿ ಪತ್ರಗಳ ಮುದ್ರಣ ಸೇವೆಯನ್ನು ಒದಗಿಸಿದ ಶ್ರೀಯುತ ಈರಪ್ಪ ಕರಶೆಟ್ಟಿ ಹಾಗೂ ಬ್ಯಾನರ್ ಸೇವೆಯನ್ನು ಒದಗಿಸಿದ ಶ್ರೀಯುತ ರಾಯೆಸಾಬ ಅಣ್ಣಿಗೇರಿ ಹಾಗೂ  ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಮತ್ತು ನಮ್ಮ ವಾರ್ಡೀನ ಸದಸ್ಯರಿಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹಾಗೂ ಮಾಜಿ SDMC ಅಧ್ಯಕ್ಷರು ಶ್ರೀಯುತ ಮೀರುಸಾಬ ಕೋಲಕಾರ ಕೂಡಾ ಶಾಲೆಗೆ 2 ಫ್ಯಾನ್ ವ್ಯವಸ್ಥೆ ಮಾಡಿದರು ಅವರನ್ನು ಕೂಡಾ ಸನ್ಮಾನಿಸಲಾಯಿತು

ನಂತರ ಅಲ್ಪೋಪಹಾರ ವ್ಯವಸ್ಥೆ ಮಾಡಲಾಗಿತ್ತು. 

ಕಾರ್ಯಕ್ರಮ ಯಶಸ್ಸಿಗೆ ಕಾರಣರಾದ ಸರ್ವರಿಗೂ ಧನ್ಯವಾದಗಳು


ಈ ಎಲ್ಲ ಕಾರ್ಯಕ್ರಮಗಳ ಚಿಕ್ಕ ಝಲಕ್ ಈ ಕೆಳಗಿನಂತಿದೆ.

























































































































Popular Posts