ಕನಕದಾಸ ಜಯಂತಿ

ಸರ್ರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಬ್ಯಾಹಟ್ಟಿ
 ಇಂದು ನಮ್ಮ ಶಾಲೆಯಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. 

ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಧಾನ ಗುರುಗಳು ಶ್ರೀಯುತ ಜಿ ಎಸ್ ಹುಬ್ಬಳ್ಳಿ ಹಾಗೂ ಸಹ ಶಿಕ್ಷಕರಾದ ಶ್ರೀಮತಿ ಮಂಜುಳಾ ಮುಕ್ರಿ ಮತ್ತು ಶ್ರೀ ಬಿ ಐ ಕೆಂಚನಗೌಡ್ರು ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ಹಾಗೂ ಶಾಲೆಯ ಮುದ್ದು ಮಕ್ಕಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಚರಿಸಲಾಯಿತು.

 ಕಾರ್ಯಕ್ರಮದಲ್ಲಿ ಭಕ್ತ ಕನಕದಾಸರ ಬಾಲ್ಯ ಜೀವನ ತಿಮ್ಮಪ್ಪನಿಂದ ಕನಕ, ಕನಕ ನಾಯಕ, ಕನಕದಾಸರಾದ ಅವರ ಜೀವನ ಚರಿತ್ರೆಯನ್ನು ಮುದ್ದು ಮಕ್ಕಳಿಗೆ ಕಥೆಯ ಮೂಲಕ ತಿಳಿಯಪಡಿಸಲಾಯಿತು ಈ ಕಾರ್ಯಕ್ರಮದ ಕೆಲವು ಭಾವಚಿತ್ರಗಳು ನಿಮಗಾಗಿ

Popular Posts