ಶಾಲಾ ಸಂದರ್ಶನ
ಶಾಲಾ ಸಂದರ್ಶನ
ಇಂದು ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ
ಶಾಂತಿನಗರ ಬ್ಯಾಹಟ್ಟಿ ಗೆ BRC ಯ BIERTಯ ಶ್ರೀಯುತ P M ಹನಕನಹಳ್ಳಿ ಗುರುಗಳು ಸಂದರ್ಶನ ನೀಡಿದರು.
ಪ್ರಾರ್ಥನಾ ಸಮಯದಲ್ಲೇ ಎಲ್ಲ ಮಕ್ಕಳ ಮಗ್ಗಿ ಓದುವುದನ್ನು ವೀಕ್ಷಣೆ ಮಾಡಿದರು. ನಂತರ ಕ್ಷೀರ ಭಾಗ್ಯ , ಸ್ವಚ್ಛತೆ ಕುರಿತು ವೀಕ್ಷಣೆ ಮಾಡಿದರು. ನಂತರ
4-5 ನೇ ತರಗತಿಯ ಪ್ರತಿ ಮಕ್ಕಳನ್ನು ವಯಕ್ತಿಕವಾಗಿ ಕರೆದು ಸ್ಪಷ್ಟ ಓದು ಹಾಗೂ ಸುಲಭ ಲೆಕ್ಕಾಚಾರ ಮಾಡಿಸಿದರು ಜೊತೆಜೊತೆಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಓದುವ ಕೌಶಲ ತಿಳಿಸಿದರು. ಹಾಗೆಯೇ 1-3 ನೇ ತರಗತಿಯ ಆಯ್ದ ಮಕ್ಕಳಿಗೆ ಓದುವ ಮತ್ತೆ ಲೆಕ್ಕ ಮಾಡುವ ಕೌಶಲ ಪರೀಕ್ಷಿಸಿದರು.
ನಂತರ ಮಕ್ಕಳಿಗೆ ಇಂಗ್ಲೀಷ್ ಹಾಡು ಹೇಳಿಸಿ ಇಂಗ್ಲೀಷ್ ಕಲಿಕೆಯನ್ನು ಕೂಡಾ ಪರೀಕ್ಷಿಸಿ ಮಕ್ಕಳ ಕಲಿಕೆಯ ಕುರಿತು ಖುಷಿಪಟ್ಟರು ಮತ್ತು ಉತ್ತಮ ಮಾರ್ಗದರ್ಶನ ಮಾಡಿದರು.
ಒಟ್ಟಾರೆ ಶಾಲಾ ಗುಣಮಟ್ಟ ಉತ್ತಮವಾಗಿದೆ ಎಂದು ಇನ್ನೂ ಅತ್ತ್ಯುತ್ತಮವಾಗಲಿ ಎಂದು ಹಾರೈಸಿ ಒಳ್ಳೆಯ ಮಾರ್ಗದರ್ಶನ ಮಾಡಿದರು.
ಧನ್ಯವಾದಗಳು
ಪ್ರಧಾನ ಗುರುಗಳು
ಶ್ರೀಯುತ G S ಹುಬ್ಬಳ್ಳಿ
ಸಹಶಿಕ್ಷಕರು
ಶ್ರೀಮತಿ ಮಂಜುಳಾ ಮುಕ್ರಿ
ಶ್ರೀ ಬಿ ಆಯ್ ಕೆಂಚನಗೌಡ್ರ
ಆ ಕ್ಷಣದ ಕೆಲವು ಫೋಟೋಗಳು,,,,

