78 ನೇ ಸ್ವಾತಂತ್ರ್ಯ ದಿನಾಚರಣೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಬ್ಯಾಹಟ್ಟಿ

 


78 ನೇ ಸ್ವಾತಂತ್ರ್ಯ ದಿನಾಚರಣೆ 

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ 

ಶಾಂತಿನಗರ ಬ್ಯಾಹಟ್ಟಿ 

               ಇಂದು ನಮ್ಮ ಶಾಲೆಯಲ್ಲಿ ಅತಿ ವಿಜ್ರಂಬಣೆಯಿಂದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ  ಬ್ಯಾಹಟ್ಟಿ ಶಾಂತಿನಗರ ಪ್ಲಾಟಿನ ಗ್ರಾಮ ಪಂಚಾಯತಿ ಸದಸ್ಯರು ಊರಿನ ಹಿರಿಯರು, ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ,ಪಾಲಕರು ,ಅಂಗನವಾಡಿಯ ಶಿಕ್ಷಕಿಯರು ಹಾಗೂ ಅಡುಗೆ ಸಿಬ್ಬಂದಿ ,ಶಾಲಾ ಶಿಕ್ಷಕ ಸಿಬ್ಬಂದಿ ಮತ್ತು ಮುದ್ದು ಮಕ್ಕಳು ಉಪಸ್ಥಿತರಿದ್ದರು.

 ಸರ್ವರನ್ನು ಮೊದಲು ಶಾಲೆಯ ಪ್ರಧಾನ ಗುರುಗಳು ತ್ರಿವರ್ಣ ಬಣ್ಣದ ಶಾಲನ್ನು ಹೊದಿಸಿ ಸ್ವಾಗತ ಮಾಡಿಕೊಂಡರು.


























 ನಂತರ ಊರಿನ ಹಿರಿಯರು ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಸರ್ವರು ಎಲ್ಲರೂ ಸೇರಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು 




ತದನಂತರ ಪ್ರಭಾತ್ಪ್ರೇರಿ ಹೋಗಿ ಹಾಸ್ಟೆಲ್ ಅಲ್ಲಿಯೂ ಕೂಡ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಶಾಲಾ ಆವರಣಕ್ಕೆ ಆಗಮಿಸಿದೆ .









ತದನಂತರ ಬಿಸಿಯೂಟ ಸೇವಿಸಿ ವೇದಿಕೆ ಕಾರ್ಯಕ್ರಮ ಪ್ರಾರಂಭಿಸಿದೆವು ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲು ಮೂವರು ದಾನಿಗಳು 30 ಪುಸ್ತಕಗಳನ್ನು ನೀಡಿದರು .

SDMC ಸದಸ್ಯಿನಿ ಶ್ರೀಮತಿ ರೇಷ್ಮಾ ಮಲ್ಲಿಕ್ ಸಾಬ್ ಮುಲ್ಲಾ

 SDMC ಸದಸ್ಯರಾದ ಶ್ರೀರಾಯಸಾಬ್ ಅಣ್ಣಿಗೇರಿ 

ಹಾಗೂ ಹಿರಿಯರಾದ ಶ್ರಿ ಈರಪ್ಪ ಅಂಗಡಿ 

ಈ ದಾನಿಗಳಿಗೆ ಸನ್ಮಾನ ಮಾಡಲಾಯಿತು ನಂತರ ಮಾಜಿ SDMC ಅಧ್ಯಕ್ಷರು ಹಾಗೂ ನೂತನ SDMC ಅಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

 ತದನಂತರ ಶಾಲೆಗೆ ಸ್ಪೀಕರ್ ವ್ಯವಸ್ಥೆ ಮಾಡಿಕೊಟ್ಟ ಶ್ರೀಯುತ ಬಸವರಾಜ್ ಅರಳಿ ಇವರಿಗೂ ಕೂಡ ಸನ್ಮಾನ ಕಾರ್ಯಕ್ರಮ ಮಾಡಲಾಯಿತು 













ದನಂತರ ಎಸ್‌ಡಿಎಂಸಿ ಅವರು ಶಾಲೆಯ ಮೂವರು ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಗೊಳಿಸಿದರು

 ಇದಾದ ನಂತರ ನಮ್ಮ ಶಾಲಾ ಮಕ್ಕಳಿಂದ ಹಾಗೂ ಅಂಗನವಾಡಿ ಮಕ್ಕಳಿಂದ ಮತ್ತು ಹಳೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು , 




































ಬಹುಮಾನ ವಿತರಣೆ ಕಾರ್ಯಕ್ರಮ


















ದನಂತರ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಈರಪ್ಪ ಅಂಗಡಿ ಯವರು ಸೇರಿ ಕಾರ್ಯಕ್ರಮಕ್ಕೆ ಭಾಗವಹಿಸಿದ ಸರ್ವರಿಗೂ ಪಲಾವ್ ಹಾಗೂ ಸಿಹಿ ವಿತರಣೆ ಮಾಡಿದರು.






 ಒಟ್ಟಾರೆ ನಮ್ಮ ಶಾಲೆಯ ಇಂದಿನ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಅತಿ ಸುಂದರವಾಗಿ ಮತ್ತು ಸುವ್ಯವಸ್ಥಿತವಾಗಿ ಜರುಗಿತು . 

ಪ್ರಧಾನ ಗುರುಗಳು 

ಶ್ರೀ G S ಹುಬ್ಬಳ್ಳಿ

ಸಹಶಿಕ್ಷಕರು

ಶ್ರೀಮತಿ ಮಂಜುಳಾ ಮುಕ್ರಿ

ಶ್ರೀ ಬಿ ಆಯ್ ಕೆಂಚನಗೌಡ್ರ

Popular Posts