ನೂತನ SDMC ರಚನೆ GLPS ಶಾಂತಿನಗರ ಬ್ಯಾಹಟ್ಟಿ
ನೂತನ SDMC ರಚನೆ
GLPS ಶಾಂತಿನಗರ ಬ್ಯಾಹಟ್ಟಿ
ದಿನಾಂಕ 15/07/2024 ರ ಸೋಮವಾರದಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಬ್ಯಾಹಟ್ಟಿಯಲ್ಲಿ ನೂತನವಾಗಿ SDMC ರಚನೆ ಮಾಡಲಾಯಿತು.
ಪಾಲಕರ ಸಭೆಯಲ್ಲಿ 18 ಜನ ಆಯ್ಕೆಯಾಗಿ ಅದರಲ್ಲಿ ಅಧ್ಯಕ್ಷರಾಗಿ ಶ್ರೀಯುತ ಪ್ರಕಾಶ ಕರಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಸುಮಂಗಲಾ ನವಲೂರ ಆಯ್ಕೆ ಆದರು.
ಈ ಸಭೆಯಲ್ಲಿ ಬ್ಯಾಹಟ್ಟಿ ಗ್ರಾಮ ಪಂಚಾಯತಿ PDO ಶ್ರೀಮತಿ ರೇಣುಕಾ ಚಿತ್ರಾಪುರ , ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಮಾದೇವಿ ಹಂಗರಕಿ , ಗ್ರಾ ಪಂ ಉಪಾಧ್ಯಕ್ಷರಾದ ಶ್ರೀಮತಿ ಮಧುಮತಿ ಹುಬ್ಬಳ್ಳಿ , ನಮ್ಮ ವಾರ್ಡಿನ ಗ್ರಾ ಪಂ ಸದಸ್ಯರಾದ ಶ್ರೀಯುತ ರಾಜೇಸಾಬ ನದಾಫ್ ಮತ್ತು ಹಿರಿಯರಾದ ಶ್ರೀಯುತ ರಾಮನಗೌಡ್ರ ಹುಯಲಗೋಳ ಮತ್ತು ಮಾಜಿ ಗ್ರಾ ಪಂ ಸದಸ್ಯರಾದ ಶ್ರೀಯುತ ಪಕ್ಕೀರಪ್ಪ ಚವಡಕಿ, SDMC ಮಾಜಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು , ಸದಸ್ಯರು, ಶಿಕ್ಷಣ ಪ್ರೇಮಿಗಳು , ಪಾಲಕರು, ಊರಿನ ಹಿರಿಯರು , ನಮ್ಮ ಶಾಲಾ ಸಿಬ್ಬಂದಿ ಎಲ್ಲರೂ ಉಪಸ್ಥಿತರಿದ್ದು ಶಾಂತಿಯುತವಾಗಿ ಆಯ್ಕೆ ಕಾರ್ಯಕ್ರಮ ಮುಗಿಸಿ ನೂತನ SDMC ರಚನೆ ಮಾಡಲಾಯಿತು. ನಂತರ ನೂತನ SDMC ಅಧ್ಯಕ್ಷರಾದ ಶ್ರೀಯುತ ಪ್ರಕಾಶ ಕರಶೆಟ್ಟಿಯವರು ಅಲ್ಪೋಪಹಾರ ಮತ್ತು ಚಹಾದ ವ್ಯವಸ್ಥೆ ಮಾಡಿದರು ಜೊತೆಗೆ ಮಕ್ಕಳಿಗೆ ಸಿಹಿ ಹಂಚಿದರು.
ಧನ್ಯವಾದಗಳು
ಪ್ರಧಾನ ಗುರುಗಳು
ಶ್ರೀಯುತ G S ಹುಬ್ಬಳ್ಳಿ
ಸಹಶಿಕ್ಷಕರು
ಶ್ರೀಮತಿ ಮಂಜುಳಾ ಮುಕ್ರಿ
ಶ್ರೀ ಬಿ ಆಯ್ ಕೆಂಚನಗೌಡ್ರ

