ಬ್ಯಾಗ್ ರಹಿತ ದಿನಾಚರಣೆ GLPS ಶಾಂತಿನಗರ ಬ್ಯಾಹಟ್ಟಿ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ 
ಶಾಂತಿನಗರ ಬ್ಯಾಹಟ್ಟಿ 
ಇಂದು ನಮ್ಮ ಶಾಲೆಯಲ್ಲಿ ಬ್ಯಾಗ್ ರಹಿತ ದಿನಾಚರಣೆ ಆಚರಿಸಲಾಯಿತು 
ಇಂದು ಮೊದಲಿಗೆ ಪ್ರಾರ್ಥನೆ ಸಾಮೂಹಿಕ ಕವಾಯತು ನಂತರ ಮಕ್ಕಳಿಗೆ ಕೆಲವು ಮನರಂಜನೆ ಆಟಗಳನ್ನು ಆಡಿಸಲಾಯಿತು 
ತದನಂತರ ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವಿಕೆ ಮತ್ತು ನಿರ್ವಹಣೆ ಈ ವಿಷಯದ ಕುರಿತು ಚಟುವಟಿಕೆಗಳ ಮುಖಾಂತರ ಮಕ್ಕಳಿಗೆ ಮಾದಕ ವಸ್ತುಗಳ ದುರುಪಯೋಗದ ಕುರಿತು ಹಾಗೂ ಅವುಗಳನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ಕುರಿತು ಮಕ್ಕಳೊಂದಿಗೆ ಚರ್ಚೆಯ ಮುಖಾಂತರ ಇವತ್ತಿನ ಈ ದಿನವನ್ನು ಕಳೆಯಲಾಯಿತು 

ನಂತರ ನಮ್ಮ ಶಾಲೆಯ ಪ್ರಧಾನ ಗುರುಗಳ ಹುಟ್ಟು ಹಬ್ಬದ ನಿಮಿತ್ತ ಮಕ್ಕಳಿಗೆ ಬಿಸಿಯೂಟ ಜೊತೆಗೆ ಸಿಹಿಯನ್ನು ನೀಡಿದರು ತದನಂತರ ನಮ್ಮ ಶಾಲಾ ಸಿಬ್ಬಂದಿ  ಅಡುಗೆ ಸಹಾಯಕರೆಲ್ಲರೂ ಸೇರಿ ಶಾಲೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. 
ಈ ರೀತಿಯಾಗಿ ಇಂದಿನ ಬ್ಯಾಗ್ ರಹಿತ ದಿನ ನಮ್ಮ ಶಾಲೆಯಲ್ಲಿ ಅಚ್ಚುಕಟ್ಟಾಗಿ ಆಚರಿಸಲಾಯಿತು ಇದರ ಕೆಲವು ಫೋಟೋಗಳು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆವು
 ಪ್ರಧಾನ ಗುರುಗಳು 
ಶ್ರೀಯುತ ಜಿಎಸ್ ಹುಬ್ಬಳ್ಳಿ 
ಸಹ ಶಿಕ್ಷಕರು 
ಶ್ರೀಮತಿ ಮಂಜುಳಾ ಮುಕ್ರಿ  
ಶ್ರೀ ಬಿ ಐ ಕೆಂಚನಗೌಡ್ರು


















 

Popular Posts