ಮಹಾನಾಯಕನ ಜನ್ಮದಿನಾಚರಣೆ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ 
ಶಾಂತಿನಗರ ಬ್ಯಾಹಟ್ಟಿ 

ಇಂದು ನಮ್ಮ ಶಾಲೆಯಲ್ಲಿ ಭಾರತರತ್ನ , ಸಂವಿಧಾನ ಶಿಲ್ಪಿ ಡಾ. ಬಿ, ಆರ್, ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಆಚರಿಸಲಾಯಿತು . ಕಾರ್ಯಕ್ರಮದಲ್ಲಿ ಪ್ರಧಾನ ಗುರುಗಳಾದ ಶ್ರೀಯುತ ಜಿ ಎಸ್ ಹುಬ್ಬಳ್ಳಿ ಹಾಗೂ ಸಹಶಿಕ್ಷಕಿಯರಾದ ಶ್ರೀಮತಿ ಮಂಜುಳಾ ಮುಕ್ರಿ ಮತ್ತು ಶಿಕ್ಷಕರಾದ ಶ್ರೀ ಬಿ ಆಯ್ ಕೆಂಚನಗೌಡ್ರ ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು

ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸುವುದಿಲ್ಲ.
ಬಾಬಾಸಾಹೇಬ ಅಂಬೇಡ್ಕರ


ಓದು, ಓದು ಓದು ಏಕೆಂದರೆ ಶತ್ರುಗಳು ನಿನ್ನ , ಜ್ಞಾನಕ್ಕೆ ಮಾತ್ರ ಹೆದರುತ್ತಾರೆ
- Dr BR Ambedkar


ಮುಟ್ಟಿಸಿಕೊಳ್ಳದವನಾಗಿ ಹುಟ್ಟಿದ ನೀನು ಅಪ್ಪಿಕೊಳ್ಳುವಂತವನಾದೆ, ಸಮಾನತೆಗಾಗಿ ಹೋರಾಡಿದ ನೀನು ಅಸಾಮಾನ್ಯನಾದೆ, ಕತ್ತಲೆ ಕೂಪದಲ್ಲಿ ಬೆಳೆದ ನೀನು ಇಡೀ ಸಮಾಜದ ಆಶಾಕಿರಣವಾದೆ.
ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ.ಬಿ.ಆ‌ರ್.ಅಂಬೇಡ್ಕರ್ ಜಯಂತಿಯ ಶುಭಾಶಯಗಳು..


ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿ ಕೊಳ್ಳುತ್ತಾರೆ, ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ.
- ಡಾ.ಬಿ.ಆರ್.ಅಂಬೇಡ್ಕ‌ರ್


ನಾನು ಕೇವಲ ಒಂದೇ ಜಾತಿ ಅಥವಾ ಒಂದೇ ಜನಾಂಗಕೋಸ್ಕರ ಕೆಲಸ ಮಾಡಿಲ್ಲ.
ಭಾರತದ ಪ್ರತಿಯೊಬ್ಬ ಕಟ್ಟ ಕಡೆಯ ವ್ಯಕ್ತಿಯ ಸಲುವಾಗಿ ಜೀವ ಸವೆಸಿದ್ದೇನೆ.
ಸಂಶಯವಿದ್ದರೆ ಹೋಗಿ ಸಂವಿಧಾನ ಓದಿಕೊಳ್ಳಿ
ಬಾಬಾ ಸಾಹೇಬ್ ಅಂಬೇಡ್ಕರ್


ಬದುಕಿದರೆ ಹುಲಿ ಸಿಂಹಗಳಂತೆ ಬದುಕಿ ಏಕೆಂದರೆ ಬಲಿಕೊಡುವುದು ಕುರಿ ಕೋಳಿಗಳನ್ನೆ ಹೊರತು ಹುಲಿ ಸಿಂಹಗಳನಲ್ಲ
ಡಾ||ಬಿ.ಆರ್ ಅಂಬೇಡ್ಕ‌ರ್


ಧನ್ಯವಾದಗಳು


Popular Posts