ಗಣರಾಜ್ಯೋತ್ಸವ ಕಾರ್ಯಕ್ರಮ



ಗಣರಾಜ್ಯೋತ್ಸವ ಕಾರ್ಯಕ್ರಮ 

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 
ಶಾಂತಿನಗರ ಬ್ಯಾಹಟ್ಟಿ 

ಇಂದು ನಮ್ಮ ಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಅತಿ ವಿಜ್ರಂಭಣೆಯಿಂದ ಜರುಗಿತು.

 ಕಾರ್ಯಕ್ರಮದಲ್ಲಿ ಶಾಂತಿನಗರ ಬ್ಯಾಹಟ್ಟಿ ಗ್ರಾಮದ ಸರ್ವ ಗುರು ಹಿರಿಯರು ,ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು , ನಮ್ಮ ಶಾಲೆಯ ಪಾಲಕರು , ಊರಿನ ಹಿರಿಯ ನಾಗರಿಕರು,  ಯುವಶಕ್ತಿ , ಮುದ್ದು ಮಕ್ಕಳು ನಮ್ಮ , ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಸ್ಟೇಲ್ ವಾರ್ಡನ್ ಹಾಗೂ ವಿದ್ಯಾರ್ಥಿಗಳು ಅಂಗನವಾಡಿ ಶಿಕ್ಷಕಿಯರು ಸಹಾಕರು ಹಾಗೂ ಮುದ್ದಾದ ಮಕ್ಕಳು ಮತ್ತು ನಮ್ಮ ಶಾಲೆಯ ಅಡುಗೆ ಸಿಬ್ಬಂದಿ ಹೀಗೆ ಊರಿನ ಸರ್ವರೆಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳ್ಳಲು ಕಾರಣೀಕೃತರಾದರು.

 ಮೊದಲಿಗೆ ನಮ್ಮ ಶಾಲೆಯ ಪ್ರಧಾನ ಗುರುಗಳು ಸರ್ವರನ್ನು ಸ್ವಾಗತಿಸಿದರು ತದನಂತರ ಭಾರತ ಮಾತೆ ಹಾಗೂ ಡಾ. ಬಿ,ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು. ತದನಂತರ ಪ್ರಭಾತ್ ಪೇರಿ ಮುಖಾಂತರ ಊರಿನಲ್ಲಿ ಸಂಚರಿಸಿ ಹಾಸ್ಟೆಲ್ ನಲ್ಲೂ ಕೂಡ ಧ್ವಜಾರೋಹಣ ಕಾರ್ಯಕ್ರಮ ಮುಗಿಸಿ ಮತ್ತೆ ಶಾಲೆಗೆ ಮರಳಿ ವೇದಿಕೆ ಕಾರ್ಯಕ್ರಮ ಪ್ರಾರಂಭಿಸಿದೆವು .

ತದನಂತರ ಮುದ್ದು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲ್ಪಟ್ಟವು ಕೊನೆಗೆ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಿಗೂ ಹಾಗೂ ಮುದ್ದು ಮಕ್ಕಳಿಗೂ ಉಪಹಾರ ವ್ಯವಸ್ಥೆ ಮಾಡಲಾಗಿತ್ತು ಒಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಅತಿ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಪ್ರಾರಂಭದಿಂದ ಕೊನೆಯವರೆಗಿನ ಚಟುವಟಿಕೆಗಳ ಫೋಟೋಗಳನ್ನು ಈ ಕೆಳಗಿನಂತೆ ನೋಡೋಣ ,

ಧನ್ಯವಾದಗಳು. 

ಪ್ರಧಾನ ಗುರುಗಳು 
ಶ್ರೀ ಜಿ ಎಸ್ ಹುಬ್ಬಳ್ಳಿ 
ಸಹ ಶಿಕ್ಷಕರು 
ಶ್ರೀ ಬಿ ಐ ಕೆಂಚನಗೌಡ್ರ 
ಶ್ರೀಮತಿ ಮಂಜುಳಾ ಮುಕ್ರಿ

ಸ್ವಾಗತ ಕಾರ್ಯಕ್ರಮ





























ಪೂಜೆ ಮತ್ತು ಧ್ವಜಾರೋಹಣ















ಪ್ರಭಾತ್ ಪೇರಿ ಮತ್ತು ಹಾಸ್ಟೆಲ್ನಲ್ಲಿ ಧ್ವಜಾರೋಹಣ



















ವೇದಿಕೆ ಕಾರ್ಯಕ್ರಮ
































 ಸಾಂಸ್ಕೃತಿಕ ಕಾರ್ಯಕ್ರಮ

























































































































 

Popular Posts