ರಾಷ್ಟ್ರೀಯ ಯುವ ದಿನ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ
ಶಾಂತಿನಗರ ಬ್ಯಾಹಟ್ಟಿ
ರಾಷ್ಟ್ರೀಯ ಯುವ ದಿನ
ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ
(12/೦/01/2024)
ಇಂದು ನಮ್ಮ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು ಈ ಒಂದು ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ಅಡುಗೆ ಸಿಬ್ಬಂದಿ ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.
ತದನಂತರ ಸ್ವಾಮಿ ವಿವೇಕಾನಂದರ ಕುರಿತು ಮಕ್ಕಳಿಗೆ ಭಾಷಣ ಹಮ್ಮಿಕೊಂಡು ಪ್ರಸಾದ ಹಂಚಲಾಯಿತು ಜೊತೆಗೆ ಕಾರ್ಯಯೋಜನೆ ರಚನೆ ಕುರಿತು ತಿಳಿಸಲಾಯಿತು
ಸಾಧನೆ ಎಂಬುದು ಸಾಧಕನ ಸ್ವತ್ತೆ ಹೊರತು ಸೋಮಾರಿಯ ಸ್ವತ್ತಲ್ಲ
ನಿನ್ನನ್ನು ನೀ ಅರಿ ನಿನ್ನಲ್ಲಿ ಅತ್ಯದ್ಭುತ ಸಾಮರ್ಥ್ಯಗಳು ಅಡಗಿವೆ
ತಲೆತಗ್ಗಿಸಿ ನಿನ್ನ ಕಾಯಕ ನೀನು ಮಾಡಿದರೆ
ಅದರ ಫಲ ನಿನ್ನನ್ನು ತಲೆ ಎತ್ತುವಂತೆ ಮಾಡುತ್ತದೆ
ನಿಮ್ಮನ್ನು ನೀವು ಜಯಿಸಿ ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ
ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ
ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ
ಅದೃಷ್ಟ ಎಂದರೆ ಅವಕಾಶವನ್ನು ಪಡೆಯುವ
ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು
ಪ್ರಧಾನ ಗುರುಗಳು
ಶ್ರೀಯುತ ಜಿ ಎಸ್ ಹುಬ್ಬಳ್ಳಿ
ಸಹ ಶಿಕ್ಷಕರು
ಶ್ರೀ ಬಿ ಐ ಕೆಂಚನಗೌಡ್ರ
ಶ್ರೀಮತಿ ಮಂಜುಳಾ ಮುಕ್ರಿ


















