ಕನಕದಾಸರ ಜಯಂತಿ GLPS ಶಾಂತಿನಗರ ಬ್ಯಾಹಟ್ಟಿ
ಕನಕದಾಸರ ಜಯಂತಿ
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
ಶಾಂತಿನಗರ ಬ್ಯಾಹಟ್ಟಿ
ಇಂದು ನಮ್ಮ ಶಾಲೆಯಲ್ಲಿ
ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಧಾನ ಗುರುಗಳು ಶ್ರೀಯುತ ಜಿ ಎಸ್ ಹುಬ್ಬಳ್ಳಿ ಕನಕದಾಸರ ಜೀವನ ಚರಿತ್ರೆ ಕುರಿತು ಮಾತನಾಡಿದರು ತದನಂತರ ಸಹಶಿಕ್ಷಕಿಯರಾದ ಶ್ರೀಮತಿ ಮಂಜುಳಾ ಮುಕ್ರಿ ಇವರು ತಿಮ್ಮಪ್ಪ ನಾಯಕ ಹೇಗೆ ಕನಕದಾಸರು ಆದರೂ ಎಂಬುದರ ಕುರಿತು ಮಾತನಾಡಿದರು
ನಂತರ ಸಹ ಶಿಕ್ಷಕರಾದ ಶ್ರೀ ಬಿ ಐ ಕೆಂಚನಗೌಡ್ರು ಶಿಕ್ಷಕರು ಅವರ ಕೃತಿಗಳ ಕುರಿತು ಮಕ್ಕಳಿಗೆ ತಿಳಿಯಪಡಿಸಿದರು ಕಾರ್ಯಕ್ರಮದಲ್ಲಿ ಅಡುಗೆ ಸಿಬ್ಬಂದಿ ಹಾಗೂ ಮುದ್ದು ಮಕ್ಕಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು
ಪ್ರಧಾನ ಗುರುಗಳು
ಶ್ರೀಯುತ ಜಿ ಎಸ್ ಹುಬ್ಬಳ್ಳಿ
ಸಹ ಶಿಕ್ಷಕರು
ಶ್ರೀ ಬಿ ಐ ಕೆಂಚನಗೌಡ್ರ
ಶ್ರೀಮತಿ ಮಂಜುಳಾ ಮುಕ್ರಿ
💐🙏🏻💐
ಕುಲ ಕುಲ ಕುಲವೆಂದು ಹೊಡೆದಾಡದಿರಿ
ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?
ಹುಟ್ಟಿದಾ ಯೋನಿಗಳಿಲ್ಲ ಮೆಟ್ಟದಾ ಭೂಮಿಗಳಿಲ್ಲ ಅಟ್ಟು ಉಣ್ಣದ ವಸ್ತುಗಳಿಲ್ಲವೋ ಗುಟ್ಟು ಕಾಣಿಸಿಬಂತು ಹಿರಿದೇನು? ಕಿರಿದೇನು? ನೆಟ್ಟನೆ ಸರ್ವಜ್ಞನೆನೆ ಕಾಣೋ ಮನುಜ
ಎಲ್ಲರು ನಿನಗೆ ಹಿತವರು ಎಂದು ನಂಬಬೇಡ ಮನವೇ.
ಆಪತ್ತು ಬಂದೊಡನೆ ಯಾರು ಯಾರಿಗೂ ಇಲ್ಲ.
ಭಕ್ತ ಪ್ರಹ್ಲಾದನಿಗೆ ಬಂದ ಸ್ಥಿತಿ ನೋಡಿ ತಂದೆ ಹಿತವನು ಎಂದು ನಂಬಬಹುದೆ?
ಹಡೆದ ಮಗುವನ್ನು ನೀರಲ್ಲಿ ತೇಲಿ ಬಿಟ್ಟ ಕುಂತಿಯನ್ನು
ನೋಡಿ ತಾಯಿ ಹಿತವಳು ಎಂದು ನಂಬಬಹುದೆ?
ತಂದೆಯನ್ನೇ ಸೆರೆಯಲ್ಲಿಟ್ಟ ಕಂಸನನ್ನು ನೋಡಿ
ಮಗ ಹಿತವನು ಎಂದು ನಂಬಬಹುದೆ? ವಾಲಿಯನ್ನು
ಕೊಲ್ಲಿಸಿದ ಅನುಜನನ್ನು ನೋಡಿ ಸೋದರ ಹಿತವನು
ಎಂದು ನಂಬಬಹುದೆ? ಆಪತ್ತು ಬಂದು ಒದಗಿದಾಗ ಯಾರಿಗೆ ಯಾರು ಇಲ್ಲ...
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ
ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆ ಬೋಧನೆಯ ಮಾಡುವುದು ಹೊಟ್ಟೆಗಾಗಿ ಚಂಡಭಟರಾಗಿ ನಡೆದು ಕತ್ತಿ ಢಾಲು ಕೈಲಿ ಹಿಡಿದು ಖಂಡ ತುಂಡ ಮಾಡುವುದು ಹೊಟ್ಟೆಗಾಗಿ
ಅಂಗಡಿ ಮುಂಗಟ್ಟನ್ನೂಡಿ ವ್ಯಂಗ್ಯ ಮಾತುಗಳನ್ನಾಡಿ ಭಂಗ ಬಿದ್ದು ಗಳಿಸುವುದು ಹೊಟ್ಟೆಗಾಗಿ
thank you




























