ಬೀಳ್ಕೊಡುವ ಸಮಾರಂಭ 06/10/2023


ಬೀಳ್ಕೊಡುವ ಸಮಾರಂಭ 
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಶ್ರೀ ಸಿದ್ದೇಶ್ವರ ಆಶ್ರಯ ಕಾಲೋನಿ ಉಣಕಲ್ 

ಈ ಶಾಲೆಯಲ್ಲಿ ನಾನು ನನ್ನ ಮೊದಲ ಸೇವೆಯನ್ನು ಪ್ರಾರಂಭಿಸಿದೆ ಜೂನ್ 5 2007 ರಿಂದ ಜುಲೈ 31 2023ರ ವರೆಗೆ 16 ವರ್ಷಗಳ ಕಾಲ ಈ ಶಾಲೆಯಲ್ಲಿ ಮೊದಲ ಸೇವೆಯನ್ನು ಸಲ್ಲಿಸಿದೆ .

ಆ ಒಂದು ಅವಧಿಯಲ್ಲಿ ನನಗೆ ಒಳ್ಳೆಯ ಸೇವೆಯನ್ನು ಒದಗಿಸಲು ನನಗೆ ಸಹಕರಿಸಿದ ಹಿರಿಯ ಸಹೋದರ ಶಿಕ್ಷಕ/ಶಿಕ್ಷಕಿಯರಾಗಿರುವ ಶ್ರೀಮತಿ A ಎಸ್ ಮುದುಗಲ್ ಶ್ರೀಮತಿ ಜೆ ಕೆ ಲಕ್ಕುಂಡಿ ಶ್ರೀಮತಿ ಆರ್ ವಿ ಹೊಸಮಠ ಶ್ರೀಯುತ ಜಿ ಕೆ ನಾಗಶೆಟ್ಟಿ ಶ್ರೀಯುತ ಸಿ ಎನ್ ಹಡಪದ ಹಾಗೂ ಪ್ರಧಾನ ಗುರುಮಾತೆ ಶ್ರೀಮತಿ  ಎಸ್ ಎಲ್ ಬೆಟಗೇರಿ ಮೇಡಮ್ ಅವರಿಗೆ ಧನ್ಯವಾದಗಳ ಅರ್ಪಿಸುತ್ತೇನೆ, 

ಇಂದು ಸನ್ಮಾನ ಕಾರ್ಯಕ್ರಮ ಹಾಗೂ ಬಿಳ್ಕೊಡುವ ಸಮಾರಂಭವನ್ನು ಹಮ್ಮಿಕೊಂಡು ಬೇರೆ ಶಾಲೆಗೆ ವರ್ಗವಾಗಿ ಅಲ್ಲಿ ನನ್ನ ಸೇವೆಯನ್ನು ಮುಂದುವರಿಸಲು ಶುಭ ಹಾರೈಸಿದ ತಮಗೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ನಿಮ್ಮ ಮಾರ್ಗದರ್ಶನ ಶುಭ ಹಾರೈಕೆ ಸದಾ ಕಾಲ ನನ್ನ ಮೇಲೆ ಇರಲಿ ಎಂದು ವಿನಂತಿಸಿಕೊಳ್ಳುತ್ತೇನೆ.


 ಶ್ರೀ ಸಿದ್ದೇಶ್ವರ ಆಶ್ರಯ ಕಾಲೋನಿ ಉಣಕಲ್ ಊರಿನ ಎಲ್ಲ ನಾಗರಿಕರಿಗೂ ಹಾಗೂ ಪಾಲಕರಿಗೂ ಮತ್ತು ಮುದ್ದು ಮಕ್ಕಳಿಗೂ ಕೂಡ ಧನ್ಯವಾದಗಳು ಅರ್ಪಿಸುತ್ತೇನೆ.

 ನನ್ನಿಂದ ಪರೋಕ್ಷ ಅಥವಾ ಪ್ರತ್ಯಕ್ಷವಾಗಿ ಏನಾದರೂ ತಮಗೆ ತಪ್ಪುಗಳನ್ನಾಡಿದ್ದರೆ ತೊಂದರೆಯನ್ನುಂಟು ಮಾಡಿದರೆ ದಯಮಾಡಿ ಕ್ಷಮೆ ಇರಲಿ 

ಹಾಗೂ ನನ್ನ ನೆನಪಿಗಾಗಿ ಆ ಶಾಲೆಗೆ ಒಂದು ಟ್ರಜೂರಿ ಹಾಗೂ ಶಿಕ್ಷಕರಿಗೆ ಊಟದ ಸಮಯಕ್ಕೆ ತಟ್ಟೆ ಹಾಗೂ ಚಮಚ ದೇಣಿಗೆ ಕೊಡಲಾಯಿತು.

ಧನ್ಯವಾದಗಳು

ಶ್ರೀ ಬಿ ಆಯ್ ಕೆಂಚನಗೌಡ್ರ ಶಿಕ್ಷಕರು













































Popular Posts