ರಾಷ್ಟ್ರೀಯ ಪೋಷಣ ಅಭಿಯಾನ
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
ಶಾಂತಿನಗರ ಬ್ಯಾಹಟ್ಟಿ
ರಾಷ್ಟ್ರೀಯ ಪೋಷಣಾ ಅಭಿಯಾನ
ಇಂದು ನಮ್ಮ ಶಾಲೆಯಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನ ಹಮ್ಮಿಕೊಳ್ಳಲಾಯಿತು ಸುಮಾರು ಮೂವತ್ತಕ್ಕಿಂತಲೂ ಹೆಚ್ಚು ವಿಧದ ಹಣ್ಣು ತರಕಾರಿ ಧಾನ್ಯಗಳನ್ನು ಸೇರಿಸಲಾಗಿತ್ತು. ಮಕ್ಕಳ ಪಾಲಕರು ನಾವು ಹೇಳಿದ ಸಾಮಗ್ರಿಗಳನ್ನು ಮಕ್ಕಳ ಕೈಯಲ್ಲಿ ಕೊಟ್ಟು ಶಾಲೆಗೆ ಕಳುಹಿಸಿದರು ಪಾಲಕರ ಪ್ರೋತ್ಸಾಹದಿಂದ ಹಾಗೂ ಮುದ್ದು ಮಕ್ಕಳು ಮತ್ತು ಶಿಕ್ಷಕರ ಸಹಕಾರದಿಂದ ಇಂದು ತುಂಬಾ ಸುಂದರವಾಗಿ ರಾಷ್ಟ್ರೀಯ ಪೋಷಣ ಅಭಿಯಾನ ನೆರವೇರಿತು ಸುಮಾರು 40ಕ್ಕಿಂತಲೂ ಹೆಚ್ಚು ಪಾಲಕರು ಶಾಲೆಗೆ ಭೇಟಿ ನೀಡಿ ಅಭಿಯಾನ ಹಾಗೂ ಹಣ್ಣು ತರಕಾರಿ ಧಾನ್ಯಗಳ ವಿಶೇಷತೆ ಮತ್ತು ಯಾವ ರೀತಿ ಬಳಸಬೇಕು ಅವುಗಳ ಉಪಯೋಗವನ್ನು ಕುರಿತು ತಿಳಿದುಕೊಂಡರು ಮತ್ತು ಅಭಿಯಾನವನ್ನು ಹಮ್ಮಿಕೊಂಡಿರುವುದರಿಂದ ಖುಷಿಪಟ್ಟು ಧನ್ಯವಾದಗಳು ಕೂಡ ತಿಳಿಸಿದರು





































































