GLPS SHANTINAGAR BYAHATTI

 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 

ಶಾಂತಿನಗರ ಬ್ಯಾಹಟ್ಟಿ 

ನೋಟ್ ಪುಸ್ತಕ ಹಾಗೂ ಬರವಣಿಗೆ ಸಾಮಗ್ರಿ ವಿತರಣೆ

ಕುಸುಗಲ್ ಗ್ರಾಮದ ಶಿಕ್ಷಣ ಪ್ರೇಮಿ ಹಾಗೂ ನನ್ನ ಆತ್ಮೀಯ ಸ್ನೇಹಿತರಾದ ಶ್ರೀಯುತ ರಮೇಶ್ ಚವಣ್ಣವರ  ಇವರ ಹುಟ್ಟುಹಬ್ಬದ ಸವಿನೆನಪಿಗಾಗಿ ನಮ್ಮ ಶಾಲೆಯ ಮುದ್ದು ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಬರವಣಿಗೆ ಸಾಮಗ್ರಿ ವಿತರಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ SDMC ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ನಮ್ಮೂರಿನ ಆತ್ಮೀಯ ಸ್ನೇಹಿತರು ಉಪಸ್ಥಿತರಿದ್ದರು. 





ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಬ್ಯಾಹಟ್ಟಿ 

ಇಂದು ಈ ಈ ಶಾಲೆಗೆ ಹಾಜರಾಗಲಾಯಿತು 2007 ರಿಂದ ಜುಲೈ 31 2023ರ ವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶ್ರೀ ಸಿದ್ದೇಶ್ವರ ಆಶ್ರಯ ಕಾಲೋನಿ ಉಣಕಲ್ ನಲ್ಲಿ ಸೇವೆ ಸಲ್ಲಿಸಿ ಇಂದು ಶಾಂತಿನಗರ ಬ್ಯಾಹಟ್ಟಿ ಊರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹಾಜರಾಗಲಾಯಿತು ಹಾಗೂ ಇಂದು ಇದೇ ಶಾಲೆಯಿಂದ ಪಟೇದ್ ಸರ್ ಕೂಡ ಈ ಶಾಲೆಯಿಂದ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಧಾನ ಗುರುಗಳು ,ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸದಸ್ಯರು , ಶಾಲೆಯ ಶಿಕ್ಷಕ ವೃಂದ,  ಅಡುಗೆ  ಸಹಾಯಕರು , ಬಿ ಇ ಓ ಕಚೇರಿಯ ಸಾಹೇಬರು ಹಾಗೂ ಹಿರಿಯ ಶಿಕ್ಷಕರು ಎಲ್ಲರೂ ಸಂತೋಷದಿಂದ ನಮ್ಮನ್ನ ಸ್ವಾಗತಿಸಿದರು ಹಾಗೂ ಇಂದು ಬಣ್ಣ ದರ್ಪಣದ ಉದ್ಘಾಟನೆಯನ್ನು ಕೂಡ ಮಾಡಲಾಯಿತು. ಇವತ್ತಿನ ಸು ಸಂದರ್ಭದಲ್ಲಿ ತೆಗೆದಂತಹ ಫೋಟೋಗಳನ್ನು ಈ ಬ್ಲಾಗ್ ಮುಖಾಂತರ ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಧನ್ಯವಾದಗಳು 
ಶ್ರೀ ಬಿ ಐ ಕೆಂಚನಗೌಡ್ರು ಶಿಕ್ಷಕರು
















































Popular Posts