ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಬ್ಯಾಹಟ್ಟಿ
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಬ್ಯಾಹಟ್ಟಿ
77ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ
ಇಂದು ನಮ್ಮ ಶಾಲೆಯಲ್ಲಿ ಅದ್ದೂರಿಯಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರು ,ಅಧ್ಯಕ್ಷರು ,ಉಪಾಧ್ಯಕ್ಷರು, ಎಸ್ ಡಿ ಎಂ ಸಿ ಅಧ್ಯಕ್ಷರು ,ಊರಿನ ಹಿರಿಯರು, ಮಹಿಳಾ ಮಣಿಗಳು ,ಹಳೆ ವಿದ್ಯಾರ್ಥಿಗಳು ,ಯುವ ಬಳಗ, ಅಡಗಿ ಸಿಬ್ಬಂದಿಯವರು ,ಅಂಗನವಾಡಿ ಮಕ್ಕಳು, ನಮ್ಮ ಶಾಲೆಯ ಮುದ್ದು ಮಕ್ಕಳು, ಹಾಸ್ಟೆಲ್ನ ಮಕ್ಕಳು ಹಾಗೂ ಶಿಕ್ಷಕರು ಹೀಗೆ ನಮ್ಮ ಬ್ಯಾಹೆಟ್ಟಿ ಗ್ರಾಮದ ಶಾಂತಿನಗರ ಬಡಾವಣೆಯ ಎಲ್ಲರೂ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅತಿ ಅದ್ದೂರಿಯಾಗಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು
ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪುಸ್ತಕ, ಪೆನ್ನು, ಪೆನ್ಸಿಲ್ ,ಊಟದ ತಟ್ಟೆ, ಹಾಲು ಕುಡಿಯಲು ಲೋಟ ಹಾಗೂ ಕಾರ್ಯಕ್ರಮದ ನಂತರ ಸಿಹಿ ಮತ್ತು ಪಲಾವ್ ಊಟ ಹೀಗೆ ಹತ್ತು ಹಲವಾರು ವಿಶೇಷ ಕ್ಷಣಗಳು ನಡೆದವು ಹಾಗೂ ಈ ಶಾಲೆಯ ವಿದ್ಯಾರ್ಥಿಗಳಿಂದ ಅತಿ ಸುಂದರವಾದ0ತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು .
ಬೆಳಗಿನ ಜಾವದಿಂದ ಕಾರ್ಯಕ್ರಮದ ಅಂತ್ಯದ ವರೆಗೂ ನಡೆದ ಕಾರ್ಯಕ್ರಮಗಳ ಫೋಟೋಗಳು ಈ ಕೆಳಗಿನಂತೆ ಇವೆ ನೋಡಿ ಆನಂದಿಸಿ
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೊದಲಿಗೆ ನೋಡೋಣ


















































































































































































