ಪೋಷಕ ಶಿಕ್ಷಕರ ಮಹಾಸಭೆ 2026

 


ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಬ್ಯಾಹಟ್ಟಿ 

ಪೋಷಕ ಶಿಕ್ಷಕರ ಮಹಾಸಭೆ 

ಇಂದು ನಮ್ಮ ಶಾಲೆಯಲ್ಲಿ ಪೋಷಕ ಶಿಕ್ಷಕರ ಮಹಾಸಭೆಯನ್ನು ಆಯೋಜಿಸಲಾಗಿತ್ತು .ಈ ಸಭೆಯಲ್ಲಿ ಎಲ್ಲಾ ಮುದ್ದು ಮಕ್ಕಳ ಪಾಲಕರು ಪಾಲ್ಗೊಂಡು ಪರೀಕ್ಷೆ ಕುರಿತು, ಸಮಯದ ಮಹತ್ವ ಕುರಿತು ಹಾಗೂ ಮನೆಯಲ್ಲಿ ಮಕ್ಕಳ ಕಲಿಕಾ ವಾತಾವರಣ ಸೃಷ್ಟಿಸುವ ಕುರಿತು ತಮ್ಮ ತಮ್ಮ ಅಭಿಪ್ರಾಯ ಹಾಗೂ ಸಲಹೆ ಸೂಚನೆಗಳನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ SDMC ಅಧ್ಯಕ್ಷರು, ಸರ್ವ ಸದಸ್ಯರು ,ಮುದ್ದು ಮಕ್ಕಳು ಹಾಗೂ ಪಾಲಕ ಪೋಷಕರು ಖುಷಿಯಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.